ಐದು ದಿನ ಬ್ಯಾಂಕ್ ಬಂದ್, ಬ್ಯಾಂಕ್ ನಲ್ಲಿ ಕೆಲಸವಿದ್ದರೆ ಇಂದೇ ಮುಗಿಸಿ…

408
firstsuddi

ನವದೆಹಲಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಬ್ಯಾಂಕ್ ನೌಕರರ ಸಂಘಟನೆ ( ಯುನೈಟೆಡ್‌ ಫೋರಮ್‌ ಆಫ್‌ ಬ್ಯಾಂಕ್‌)   ಡಿಸೆಂಬರ್ 21 ಮತ್ತು 26 ರಂದು  ಮುಷ್ಕರಕ್ಕೆ   ಕರೆ ನೀಡಿದೆ.ಡಿಸೆಂಬರ್ 21 ರಿಂದ (ಡಿ. 24 ಹೊರತುಪಡಿಸಿ) ಡಿಸೆಂಬರ್ 26ರವರೆಗೆ ಎಲ್ಲಾ ಬ್ಯಾಂಕ್​ಗಳೂ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಲಿವೆ.ಆದ್ದರಿಂದ ಬ್ಯಾಂಕ್ ನಲ್ಲಿ ಕೆಲಸವಿದ್ದರೆ ಇಂದೇ ಮುಗಿಸಿಕೊಳ್ಳಿ. 

  • ಡಿಸೆಂಬರ್ 21 ರಂದು ಬ್ಯಾಂಕ್‌ ನೌಕರರ ಒಕ್ಕೂಟದಿಂದ ಮುಷ್ಕರ.
  • ಡಿಸೆಂಬರ್ 22 ರಂದು  ನಾಲ್ಕನೇ ಶನಿವಾರ ಬ್ಯಾಂಕ್ ರಜೆ.
  • ಡಿಸೆಂಬರ್ 23 ರಂದು ಭಾನುವಾರ.
  • ಡಿಸೆಂಬರ್ 24 ರಂದು  ಬ್ಯಾಂಕ್ ಕಾರ್ಯನಿರ್ವಹಿಸಲಿದೆ.
  • ಡಿಸೆಂಬರ್ 25 ರಂದು ಕ್ರಿಸ್‌ಮಸ್‌  ರಜೆ. 
  • ಡಿಸೆಂಬರ್ 26ರಂದು  ಬ್ಯಾಂಕ್  ನೌಕರರ ಮುಷ್ಕರ.