ಸ್ನೇಹಿತನೊಂದಿಗೆ ಲಾಡ್ಜ್‌ಗೆ ತೆರಳಿದ್ದ  ಯುವತಿ ನೇಣಿಗೆ ಶರಣು…

454
firstsuddi

ಹಾಸನ: ಯುವತಿವೋರ್ವಳು  ಲಾಡ್ಜ್ ನಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ಚಿರಂತಿ(24)  ಆತ್ಮಹತ್ಯೆಗೆ  ಶರಣಾದ  ಯುವತಿ. ಚಿರಂತಿ  ರಾಕೇಶ್ ಎಂಬ ಗೆಳೆಯನೊಂದಿಗೆ  ನಿನ್ನೆ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಆದರೆ  ಇಂದು ಬೆಳಿಗ್ಗೆ ರಾಕೇಶ್  ಶೌಚಾಲಯದ  ಬಾಗಿಲನ್ನು ಎಷ್ಟು ತಟ್ಟಿದರೂ  ಚಿರಂತಿ ಬಾಗಿಲು ತೆಗೆಯದಿದ್ದಾಗ   ರಾಕೇಶ್   ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಲಾಡ್ಜ್ ಬಾಗಿಲು  ಮುರಿದು ನೋಡಿದಾಗ ಚಿರಂತಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಾಸನ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.