ಅಲಹಾಬಾದ್: ಒಂದೇ ಕುಟುಂಬದ ಐವರು ಮನೆಯೊಳಗೆ ಶವಗಳಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಕಂಡು ಬಂದಿದ್ದು, ಪತ್ನಿಯ ಶವ ಫ್ರಿಡ್ಜ್ ನಲ್ಲಿ, ಮೂವರು ಹೆಣ್ಣು ಮಕ್ಕಳ ಶವ ಸೂಟ್ ಕೇಸ್ ನಲ್ಲಿ, ಅಪ್ಪನ ಶವ ನೇಣಿನ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಹೆಂಡತಿ ಹಾಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೊಂದು ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿದ ಮೇಲೆಯೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.