ತಪ್ಪು ತಿದ್ದಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ.- ಹೆಚ್ ಡಿ ರೇವಣ್ಣ

780
firstsuddi

ಬೆಂಗಳೂರು- ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರನ್ನು ಭೇಟಿ ಮಾಡಿದ ಹೆಚ್.ಡಿ.ರೇವಣ್ಣ ಅವರು, ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಕೈಗೆ ನೀಡದೆ ಎಸೆದಿರುವುದು ಯಾಕೆ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಹೆಚ್.ಡಿ ರೇವಣ್ಣ ನಾನು ದೂರದಲ್ಲಿ ಕುಳಿತವರಿಗೆ ಬಿಸ್ಕೇಟ್ ಪ್ಯಾಕೇಟ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಬಿಸ್ಕೆಟ್ ಪ್ಯಾಕೆಟ್ ಎಸೆದೆ. ಇದರಿಂದ ಯಾರ ಮನಸ್ಸಿಗದರೂ ನೋವಾಗಿದ್ದರೆ ತಪ್ಪಾಯಿತು ಬಿಡಿ, ಒಳ್ಳೆಯ ಕೆಲಸ ಮಾಡುವಾಗ ಇವೆಲ್ಲಾ ಸಾಮಾನ್ಯ. ನಮ್ಮನ್ನು ಕಂಡರೆ ಮಾಧ್ಯಮದವರಿಗೆ ಪ್ರೀತಿ ಜಾಸ್ತಿ. ತಪ್ಪು ತಿದ್ದಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಎಂದರು.
25 ವರ್ಷ ವೋಟು ಹಾಕಿಸಿಕೊಂಡವರು ಯಾರು ಆ ಕಡೆ ಹೋಗಿಲ್ಲ ನಾನೇ ಮೊದಲು ಕೊಡಗಿಗೆ ಹಾಲು ಮತ್ತು ಬಿಸ್ಕೆಟ್ ಪ್ಯಾಕೆಟ್ ತೆಗೆದುಕೊಂಡು ಹೋಗಿದ್ದು, ಅಲ್ಲಿ ನಾಲ್ಕು ದಿನ ನಾನು ಇದ್ದೆ. ನನ್ನ ಪತ್ನಿ ಕೂಡ ಹೋಗಿದ್ದರು.ನಿರಾಶ್ರಿತರಿಗೆ ಅಕ್ಕಿ, ತೊಗರಿಬೇಳೆ ಕೊಟ್ಟು ಬಂದೆವು. ರಾಮನಾಥಪುರದಲ್ಲಿ ನಿರಾಶ್ರಿತರನ್ನು ಭೇಟಿ ಮಾಡಲು ಹೋದಾಗ ಹೆಂಗಸರು ಕೂಗಿ ಕೊಳ್ಳುವಾಗ ನಾನು ಬಿಸ್ಕೆಟ್ ಪ್ಯಾಕೇಟ್ ಗಳನ್ನು ಎಸೆದೆ ಅಷ್ಟೇ ಇಂಥ ಸಂದರ್ಭದಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ .ಇಂಥ ಕಷ್ಟದ ಸಂದರ್ಭದಲ್ಲಿ ಎಲ್ಲ ನಾಯಕರು ಒಟ್ಟಾಗಿ ಜನರಿಗೆ ಸ್ಪಂದಿಸಬೇಕು.ಜನರ ಬಳಿ ಕ್ಷಮೆ ಕೇಳಿ ಎಂದರೆ ನಾನು ಕ್ಷಮೆ ಕೇಳುತ್ತೇನೆ. ಜನರಿಗಿಂತ ದೊಡ್ಡವರು ಯಾರು ಇಲ್ಲ ಎಂದರು.