ರೇವಣ್ಣ ಅವರು ನಿರಾಶ್ರಿತರ ಬಗ್ಗೆ ಕಾಳಜಿ ಹೊಂದಿದ್ದಾರೆ.- ಮುಖ್ಯಮಂತ್ರಿ ಕುಮಾರಸ್ವಾಮಿ…

988
firstsuddi

ಬೆಂಗಳೂರು- ಕೊಡಗು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು, ಅಲ್ಲಿ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಕೈಗೆ ನೀಡದೆ ಎಸೆದಿರುವುದು ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದ್ದು,  ಸಚಿವ ಹೆಚ್.ಡಿ. ರೇವಣ್ಣ ನಡೆಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಯಿಸಿ ಮಾತನಾಡಿ ರೇವಣ್ಣ ಅವರು ನಿರಾಶ್ರಿತರ ನೆರವಿಗಾಗಿ ಹಾಲು, ಸಕ್ಕರೆ, ಅಕ್ಕಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಕಳೆದ ನಾಲ್ಕೈದು ದಿನಗಳಿಂದ ನಿರಾಶ್ರಿತರ ಕೇಂದ್ರಕ್ಕೆ ತಲುಪಿಸುತ್ತಿದ್ದಾರೆ. ಆದರೆನಿರಾಶ್ರಿತ ಕೇಂದ್ರವೊಂದರಲ್ಲಿ ಜನ-ಜಂಗುಳಿಯಲ್ಲಿ ಬಿಸ್ಕೇಟ್ ಪ್ಯಾಕೇಟ್ ನೀಡುವಾಗ ಸ್ವಲ್ಪ ಲೋಪವಾಗಿದೆ. ತಪ್ಪಾಗಿದೆ ಆದರೆ ದುರಂಕಾರದಿಂದ ವರ್ತಿಸಿಲ್ಲ .ನಮ್ಮ ಸಚಿವರು, ಅಧಿಕಾರಿಗಳು ನಿದ್ರೆಯಿಲ್ಲದೆ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ರೇವಣ್ಣ ಅವರು ಕೂಡ ನಿರಾಶ್ರಿತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಯಾರು ಬೇಜವಾಬ್ದಾರಿ ಯಿಂದ ವರ್ತಿಸುತ್ತಿಲ್ಲ. ಹಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಕೆಲವೊಂದು ಘಟನೆಗಳನ್ನು ಮಾತ್ರ ವಿಜೃಂಭಿಸುವುದು ಸರಿಯಲ್ಲ , ಇದು ದೇವರ ಕೆಲಸವೆಂದು ಭಾವಿಸಿ ಎಲ್ಲರೂ ಈ ವಿಪತ್ತಿಗೆ ಸಹಾಯ ಹಸ್ತ ನೀಡಬೇಕೆಂದು. ಎಂದು ಸಿಎಂ ಕುಮಾರಸ್ವಾಮಿ ಸಚಿವ ರೇವಣ್ಣ ಅವರ ವರ್ತನೆಗೆ ಸಮಜಾಯಿಷಿ ನೀಡಿದ್ದಾರೆ.