ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ಅವ್ಯವಹಾರ ಪ್ರಕರಣದ ವಿಚಾರಣೆಗಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬೆಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.ನಿನ್ನೆ ಸಿಸಿಬಿ ಪೊಲೀಸರು ನೀಡಿದ ನೋಟಿಸ್ ಬೆನ್ನಲ್ಲೇ ಇಂದು ಜನಾರ್ದನ ರೆಡ್ಡಿಯವರು ತಮ್ಮ ವಕೀಲರುಗಳಾದ ಸಿ ಎಚ್ ಹನುಮಂತರಾಯಪ್ಪ ಮತ್ತು ಚಂದ್ರಶೇಖರ್ ಜೊತೆ ಕಚೇರಿಗೆ ಆಗಮಿಸಿದ್ದು, ರೆಡ್ಡಿಯವರನ್ನು ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಅವರು ವಿಚಾರಣೆ ನಡೆಸುತ್ತಿದ್ದಾರೆ.










