ಹಂತಕರ ಗುಂಡೇಟಿಗೆ ಬಲಿಯಾದ ಗೌರಿಲಂಕೇಶ್ ಜನ್ಮದಿನ ಇಂದು, ನ್ಯಾಯ ಕೇಳಿ ಬೀದಿಗಿಳಿದು ಹೋರಾಟ

505

ಬೆಂಗಳೂರು: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ಗೆ ಇಂದು ಜನ್ಮದಿನ. ಹೀಗಾಗಿ ಇಂದು ನಗರದ ಟೌನ್‍ಹಾಲ್‍ನಲ್ಲಿ ಗೌರಿ ದಿನ ಆಯೋಜನೆ ಮಾಡಲಾಗಿದೆ. ಗೌರಿ ಹತ್ಯೆಗೆ ನ್ಯಾಯ ಕೇಳಿ ಗೌರಿ ಸ್ಮಾರಕ’ಇಂದು ಬೀದಿಗಿಳಿದು ಹೋರಾಟ ಮಾಡಲಿದ್ದು, ಈ ಮೂಲಕ ನಾನು ಗೌರಿ ಅನ್ನೋ ಹೋರಾಟವನ್ನ ಮತ್ತೆ ಶುರುಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಗ್ನೇಶ್ ಮೇವಾನಿ, ಕನ್ನಯ್ಯ ಕುಮಾರ್, ದೊರೆಸ್ವಾಮಿ, ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ಸಾಹಿತಿಗಳು ಆಗಮಿಸಲಿದ್ದಾರೆ. ಇಂದು ಗೌರಿ ಲಂಕೇಶ್ ಕುರಿತಾದ ಪುಸ್ತಕ ಕೂಡ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 5, 2017 ಮಂಗಳವಾರ ರಾತ್ರಿ ಸುಮಾರು 7.30 ರ ಸುಮಾರಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗವೇ ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡಿಟ್ಟು ಹತ್ಯೆ ಮಾಡಿದ್ದರು.

ತನಿಖೆಯ ನಂತರ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದರು. ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು. ಪ್ರಕರಣದ ಕುರಿತು ಮತ್ತಷ್ಟು ಸುಳಿವನ್ನು ಪಡೆಯುವ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಮತ್ತೆ ಕಾಟ್ರೇಜ್‍ಗಳ ಮರು ಪರೀಕ್ಷೆಯನ್ನು ನಡೆಸುತ್ತಿದ್ದು, ತನಿಖಾ ತಂಡ ಹಂತಕರನ್ನು ಹುಡುಕುವ ಕಾರ್ಯಚಾರಣೆ ಮಾಡುತ್ತಿದೆ.