ತರೀಕೆರೆ ಶಾಸಕ ಶ್ರೀನಿವಾಸ್ ಹುಟ್ಟುಹಬ್ಬಕ್ಕಾಗಿ ಬೃಹತ್ ಉದ್ಯೋಗ ಮೇಳ, 6 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಭಾಗ್ಯ

565

ತರೀಕೆರೆ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಾಸಕ ಶ್ರೀನಿವಾಸ್. ತಮ್ಮ ಹುಟ್ಟುಹಬ್ಬದ ಅಂಗವಾಗಿ ತರೀಕೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳವನ್ನ ಏರ್ಪಡಿಸಿದ್ರು. ಪದವಿ, ಸ್ನಾತಕೋತ್ತರ ಪದವಿ ಪಡೆದು ಕೆಲಸ ಹುಡುಕ್ತಿದ್ದ ಸುಮಾರು ಆರು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ತಮ್ಮ ಭವಿಷ್ಯವನ್ನ ಓರೆಗಲ್ಲಿಗೆ ಹಚ್ಚಿದ್ರು. ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ತಮ್ಮ ವಿದ್ಯಾರ್ಹತೆ, ಭಾಷಾ ಸಾಮಥ್ರ್ಯಕ್ಕನುಗುಣವಾಗಿ ಕೆಲಸವನ್ನು ಪಡೆದ್ರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಶ್ರೀನಿವಾಸ್, ಪ್ರತಿವರ್ಷವೂ ನನ್ನ ಹುಟ್ಟುಹಬ್ಬಕ್ಕೆ ಒಂದೊಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಈ ಬಾರಿ ನಿರುದ್ಯೋಗಿಗಳಿಗೆ ಅನುಕೂಲವಾಗಲೆಂದು ಈ ಕಾರ್ಯಕ್ರಮ ಮಾಡಿದ್ದೇವೆ ಅಂತಾರೆ.

ಈ ಉದ್ಯೋಗ ಮೇಳದಲ್ಲಿ ದೆಹಲಿ, ಬೆಂಗಳೂರು, ಮುಂಬೈ, ಮೈಸೂರು, ಶಿವಮೊಗ್ಗದ ಖಾಸಗಿ ಕಂಪನಿಗಳು ಸೇರಿದಂತೆ ಸುಮಾರು 65ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ವು. ಭಾಗವಹಿಸಿದ್ದ ಆರು ಸಾವಿರ ವಿಧ್ಯಾರ್ಥಿಗಳಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆಫರ್ ಲೆಟರ್ ಕೂಡ ಸಿಕ್ಕಿದೆ. ನಾವು ಓದು ಮುಗಿದ ಮೇಲೆ ಎರಡ್ಮೂರು ವರ್ಷಗಳಿಂದ ಕೆಲಸಕ್ಕಾಗಿ ಅಲೆಯುತ್ತಿದ್ವಿ, ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಖಾಸಗಿ ಕಂಪನಿಗಳಲ್ಲಿ ಹೇಗೆ ಕೆಲಸ ಪಡೆದುಕೊಳ್ಳಬೇಕೆಂಬುದು ನಮಗೆ ಗೊತ್ತಿರಲಿಲ್ಲ. ಆದ್ರೆ, ಶಾಸಕರು ಈ ರೀತಿ ಉದ್ಯೋಗ ಮೇಳೆ ಏರ್ಪಡಿಸಿದ್ರಿಂದ ನಮಗೆ ಒಂದು ಕೆಲಸ ಸಿಕ್ಕಿದೆ ಅಂತ ಶಾಸಕರ ಈ ಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.