ಕೊರೊನಾ ವೈರಸ್‍ನಿಂದ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಸರ್ಕಾರದಿಂದ ಆಹಾರ ಪೂರೈಕೆ…

152
firstsuddi

ಬೆಂಗಳೂರು : ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ವೈರಸ್ ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರಿಗೆ ಸರ್ಕಾರದಿಂದಲೇ ಆಹಾರ ಪೂರೈಕೆ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿತರು ಹಾಗೂ ಶಂಕಿತರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮಹತ್ತರದ ನಿರ್ಧಾರವನ್ನು ಕೈಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಶಂಕಿತರಿಗೆ ಸರ್ಕಾರದಿಂದ ಬೆಳಿಗ್ಗೆ ಇಡ್ಲಿ, ರಾಗಿಮುದ್ದೆ, ಎರಡು ಮೊಟ್ಟೆ, ಬಾಳೆಹಣ್ಣು ಹಾಗೂ ನೀರನ್ನು ತಟ್ಟೆಯಲ್ಲಿ ಇಟ್ಟು ಫುಲ್ ಪ್ಯಾಕ್ ಮಾಡಿ ವಿತರಿಸಲಾಗುತ್ತಿದೆ.