ಬೆಂಗಳೂರು- ಆನ್ ಲೈನ್ ಮೂಲಕ ಅಗತ್ಯವಿರುವ ಪದವಿ ಪೂರ್ವ ಕಾಲೇಜ್ ಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ತಿಳಿಸಿದ್ದು ಇದಕ್ಕೆ ಸಲಹೆ ನೀಡಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು ನೀವು ಆನ್ ಲೈನ್ ಮೂಲಕ ನೇಮಕ ಮಾಡಿಕೊಂಡರೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಉಪನ್ಯಾಸಕರು ಕೈ ಬಿಟ್ಟು ಹೋಗುತ್ತಾರೆ. ಮೊದಲು ಅವರಿಗೆಲ್ಲ ಅವಕಾಶ ಕೊಟ್ಟು ನಂತರ ನೀವು ಆನ್ ಲೈನ್ ಮೂಲಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಿ ಎಂದು ಹೇಳಿದರು.