ಚಿಕ್ಕಮಗಳೂರು : ಡಾಕ್ಟರ್ ಮಗ ಡಾಕ್ಟರ್ ಆದ್ರೆ ಸಂಕಟವಿಲ್ಲ. ಜಡ್ಜ್ ಮಗ ಜಡ್ಜ್ ಆದ್ರೆ ಚರ್ಚೆ ಇಲ್ಲ. ರಾಜಕಾರಣಿ ಮಗ ರಾಜಕಾರಣಿಯಾದ್ರೆ ಯಾಕೆ ಯೋಚಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಕನಕಪುರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಸೊಸೆಯನ್ನ ಮೇಲೆ ತರಬೇಕೆಂದು ಒಳಗೊಳಗೆ ಏನೋ ಇದೆ ಅನ್ನೋದೆಲ್ಲಾ ಸುಳ್ಳು. ನಾನು ಅಲ್ಲಿ ಐದು ಗಂಟೆ ಕೂತು ಕನ್ವಿನ್ಸ್ ಮಾಡಿದ್ದೇನೆ. ಯಾರೊಬ್ರು ಟಿಕೆಟ್ ಆಕಾಂಕ್ಷಿಗಳಿಲ್ಲ. ಯಾರು ಟಿಕೆಟ್ ಕೇಳಬಾರದೆಂದು ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ಮೂರು ಬಾರಿ ಪಂಚಾಯತಿ ಕೂಡ ನಡೆಸಿದ್ದೇವೆ. ಈಗಲೂ ಬಹಿರಂಗವಾಗಿ ಹೇಳುತ್ತಿದ್ದೇನೆ. ಟಿಕೆಟ್ ಆಕಾಂಕ್ಷಿಗಳಿದ್ರೆ ಯಾರಾದ್ರು ಮುಂದೆ ಬನ್ನಿ ಅಂತ. ಆದ್ರೆ ಯಾರೊಬ್ರು ಬಂದಿಲ್ಲ ಅಂದ್ರು.
Home Breaking News ಡಾಕ್ಟರ್ ಮಗ ಡಾಕ್ಟರ್ ಆದ್ರೆ, ಜಡ್ಜ್ ಮಗ ಜಡ್ಜ್ ಆದ್ರೆ ಸಂಕಟವಿಲ್ಲ, ರಾಜಕಾರಣಿ ಮಗ ರಾಜಕಾರಣಿಯಾದ್ರೆ...