ಮೂಡಿಗೆರೆ : ಕಾರಿನಲ್ಲಿ ಜನರನ್ನಕಿಡ್ನಾಪ್ ಮಾಡೋದನ್ನ ನೋಡಿದ್ದೇವೆ. ಆದ್ರೆ, ಚಿಕ್ಕಮಗಳೂರಿನ ಪ್ರಚಂಡ ಕಳ್ಳರ ತಂಡವೊಂದು ಕಾರಿನಲ್ಲಿ ದನವನ್ನ ಕಿಡ್ನಾಪ್ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು, ಕಳೆದ ಎರಡ್ಮೂರು ದಿನದ ಹಿಂದೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪಲ್ಗುಣಿ ಗ್ರಾಮದ ವೆಂಕಟೇಶ್ ಎಂಬುವರಿಗೆ ಸೇರಿದ ದನವನ್ನ ಕಳ್ಳರ ತಂಡವೊಂದು ತನ್ನ ಇನೋವಾ ಕಾರಿನಲ್ಲಿ ಕದ್ದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಲ್ಗುಣಿ ಗ್ರಾಮದಲ್ಲಿ ಆಗಿಂದಾಗ್ಗೆ ದನಗಳು ಕಳ್ಳತನವಾಗುತ್ತಿತ್ತು, ಈ ಹಿನ್ನೆಲೆ ವೆಂಕಟೇಶ್ ಎಂಬುವರು ತನ್ನ ಮನೆಗೆ ಸಿಸಿಟಿವಿ ಅಳವಡಿಸಿದ್ರು, ಸಿಸಿಟಿವಿ ಅಳವಡಿಸಿದ ಬೆನ್ನಲ್ಲೆ ಕಳ್ಳರ ಕೈಚಳದ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ದನವನ್ನ ಇನೋವಾ ಕಾರಿನಲ್ಲಿ ಕದ್ದು ಪರಾರಿಯಾಗುತ್ತಿರೋದನ್ನ ನೋಡಿದ್ರೆ ಇದು ಹೈಟೆಕ್ ಕಳ್ಳರ ಗ್ಯಾಂಗ್ ಎಂಬಂತಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದೂರು ದಾಖಲಾಗಿಲ್ಲ.