ನನ್ನದು ಸ್ವಾತಿ ನಕ್ಷತ್ರ, ನನಗೇನಾದರೂ ಮಾಡಲು ಬಂದರೆ ಅದು ಅವರಿಗೆ ರಿವರ್ಸ್ ಆಗುತ್ತೆ: ಹೆಚ್. ಡಿ ರೇವಣ್ಣ…

226
firstsuddi

ಹಾಸನ: ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರು ನನ್ನ ಮೇಲೆ ದೈವಾನುಗ್ರಹವಿದೆ. ನನ್ನದು ಸ್ವಾತಿ ನಕ್ಷತ್ರ. ನನಗೆ ಯಾವ ಮಾಟ ಮಂತ್ರನು ತಗಲುವುದಿಲ್ಲ. ನನ್ನ ಮೇಲೆ ಈಶ್ವರ ಮತ್ತು ಶೃಂಗೇರಿ ಗುರುಗಳ ಆಶೀರ್ವಾದವಿದೆ. ನನಗೇನಾದರೂ ಮಾಡಲು ಬಂದರೆ ಅದು ಅವರಿಗೆ ರಿವರ್ಸ್ ಆಗುತ್ತೆ
ಎಂದು ಹೆಚ್. ಡಿ ರೇವಣ್ಣ ಅವರು ಹೇಳಿದ್ದಾರೆ.