ಇಂದಿನಿಂದ ಹಾಸನಾಂಬೆ ದೇವಿಯ ದರ್ಶನ ಆರಂಭ…

457
firstsuddi

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನಾಂಬೆ ದೇವಿಯ ದರ್ಶನ ಇಂದಿನಿಂದ ಆರಂಭವಾಗಲಿದ್ದು, ಪ್ರತಿವರ್ಷ ಅಶ್ವೀಜ ಮಾಸದ ಮೊದಲನೆಯ ಗುರುವಾರ ಅಂದರೆ ಇಂದು ದೇವಾಲಯದ ಗರ್ಭಗುಡಿ ಬಾಗಿಲು ಪೂಜಾ ವಿಧಿ ವಿಧಾನಗಳ ಮೂಲಕ ಬಾಗಿಲು ತೆರೆಯಲಾಗುವುದು. ಆದರೆ ಇಂದು ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚುವ ಮುನ್ನ ದೇವಿಗೆ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಅಂದರೆ ಒಂದು ವರ್ಷಗಳ ಕಾಲ ದೀಪ ಉರಿಯುತ್ತಲೇ ಇರುತ್ತದೆ. ಇದು ಈ ತಾಯಿಯ ಒಂದು ಪವಾಡ ಎಂದು ಹೇಳಬಹುದು.
 300 ರೂ. ಟಿಕೆಟ್ ಖರೀದಿ ಮಾಡಿ ಹಾಸನ ದರ್ಶನ ಪ್ಯಾಕೇಜ್ ನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಸನಾಂಬ ದೇವಿ ದರ್ಶನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.