ಕಾಫಿನಾಡು ಚಿಕ್ಕಮಗಳೂರಲ್ಲಿ ವರುಣನ ಸಿಂಚನ : ರೈತರು, ಕಾಫಿಬೆಳೆಗಾರರಲ್ಲಿ ಮಂದಹಾಸ

589

ಚಿಕ್ಕಮಗಳೂರು : ಕಾದ ಕಾವಲಿಯಂತಾಗಿದ್ದ ಕಾಫಿನಾಡು ಚಿಕ್ಕಮಗಳೂರಲ್ಲಿ ವರುಣ ಅಬ್ಬರ ಮಲೆನಾಡಿಗರನ್ನ ಬೆಚ್ಚಿ ಬೀಳಿಸಿದೆ. ಭಾರೀ ಗುಡುಗು, ಸಿಡಿಲು ಮಳೆ-ಗಾಳಿಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಆಲಿಕಲ್ಲು ಮಳೆಗೆ ಕಾಫಿಬೆಳೆಗಾರರು, ರೈತರು, ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಭಾರೀ ಗಾಳಿಗೆ ಚಿಕ್ಕಮಗಳೂರಿನ ಸುಭಾಷ್ ಚಂದ್ರ ಭೋಸ್ ಆಟದ ಮೈದಾನದಲ್ಲಿ ನಡೆಯುತ್ತಿರೋ ಫುಟ್‍ಬಾಲ್ ಪಂದ್ಯಾವಳಿಗೆ ಹಾಕಿದ್ದ ಬೋರ್ಡ್‍ಗಳು ಕೂಡ ಹಾರಿ ಹೋಗಿವೆ. ಧಾರಾಕಾರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸಿದೆ ಕ್ರೀಡಾಂಗಣದಲ್ಲಿ ಬಿದ್ದ ಆಲಿಕಲ್ಲನ್ನ ಯುವತಿಯರು ಆರಿಸಿಕೊಂಡು ತಿನ್ನಲು ಮುಂದಾದ್ರು. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದ್ದು, ರೈತರು ಮೊಗದಲ್ಲಿ ಮಂದಹಾಸ ಮೂಡಿದ್ರೆ, ಕಾಫಿ ಬೆಳೆಗಾರರು ಈ ಮಳೆ ಹೀಗೆ ಎರಡ್ಮೂರು ಇಂಚು ಬೀಳಲೆಂದು ವರುಣದೇವನಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.