ಕಳೆದ ರಾತ್ರಿ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಕನ್ನಹಡ್ಲು ಗ್ರಾಮದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಭಾರೀ ಮಳೆಗೆ ಗುಡ್ಡದ ಜೊತೆ ಬೃಹತ್ ಮರವೊಂದು ರಸ್ತೆ ಅಡ್ಡಲಾಗಿ ಬಿದ್ದ ಪರಿಣಾಮ ಹಿರೇಬೈಲು, ಬಾಳೆಹೊಳೆ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಸುರಿಯೋ ಮಳೆಯಲ್ಲೇ ಯಂತ್ರಗಳಿಂದ ಮರವನ್ನ ಕತ್ತರಿಸಿ, ಮಣ್ಣನ್ನ ತೆಗಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.