ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹದ ಪತ್ತೆಗಾಗಿ 30 ಜನರ ಎನ್.ಡಿ.ಆರ್.ಎಫ್ ತಂಡದಿಂದ ಶೋಧ ಕಾರ್ಯಚರಣೆ.

515

ಚಿಕ್ಕಮಗಳೂರು- ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಮಳೆಗೆ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹುಡುಕಲು 30 ಜನರ ಎನ್.ಡಿ.ಆರ್.ಎಫ್ ತಂಡ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿಗೆ ಆಗಮಿಸಿದ್ದು. ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ 24 ವರ್ಷದ ಅಶೋಕ್ ಸೇತುವೆ ಮೇಲೆ ಸಂಚರಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಶಂಕಿಸಲಾಗಿದ್ದು ಬೈಕನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗುವಾಗ ಅಶೋಕ್ ಎಂಬ ಯುವಕ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆಂದು ನಿನ್ನೆ ಆತನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ಅಶೋಕ್ ಸಂಚರಿಸುತ್ತಿದ್ದ ಬೈಕ್ ಹಳ್ಳದಿಂದ 50 ಮೀಟರ್ ದೂರದಲ್ಲಿ ಪತ್ತೆಯಾಗಿದ್ದು. ಸ್ಥಳಿಯರು ಹಾಗೂ ಪೊಲೀಸರು ಬೈಕ್ ಗೆ ಹಗ್ಗ ಕಟ್ಟಿ ನದಿಯಿಂದ ಎಳೆದಿದ್ದು. ಜೆಸಿಬಿ ಬಳಸಿ ಇಡೀ ದಿನ ಕಾರ್ಯಾಚರಣೆ ನಡೆಸಿದರು ಕೂಡ ಅಶೋಕ್ ಮೃತದೇಹ ಪತ್ತೆಯಾಗಿರಲಿಲ್ಲ. ಆದ್ದರಿಂದ ಇಂದು ಎನ್.ಡಿ.ಆರ್.ಎಫ್ ತಂಡ ಮೃತದೇಹದ ಪತ್ತೆಗಾಗಿ ಆಗಮಿಸಿದೆ. ಆದರೆ, ಸೋನೆ ಮಳೆ ಕೂಡ ಕಾರ್ಯಚರಣೆಗೆ ಅಡ್ಡಿಯುಂಟು ಮಾಡುತ್ತಿದ್ದು . ಮೃತ ಅಶೋಕ್ ನನ್ನ ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದವನೆಂದು ಗುರುತಿಸಲಾಗಿದ್ದು, ಮೃತದೇಹಕ್ಕಾಗಿ ಇಂದೂ ಶೋಧ ಕಾರ್ಯ ಮುಂದುವರೆದಿದೆ.