ಮಧ್ಯಮ ವರ್ಗಕ್ಕೆ ಅಗ್ಗದ ದರದಲ್ಲಿ ಮನೆ ಸಾಲ

355

ನವದೆಹಲಿ :ನರೇಂದ್ರ ಮೋದಿ ಸರ್ಕಾರ ಅಗ್ಗದ ಸಾಲ ಸೌಲಭ್ಯ ನೀಡ್ತಿದೆ. ಮಧ್ಯಮ ವರ್ಗದ ಜನರು ಖರೀದಿಸುವ ದೊಡ್ಡ ಮನೆಗಳಿಗೆ ಅಗ್ಗದಲ್ಲಿ ಸಾಲ ದೊರೆಯಲಿದೆ. ರಿಯಲ್ ಎಸ್ಟೇಟ್ ವಲಯವನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ.
ಹಾಗಾಗಿ ಸದ್ಯದಲ್ಲೇ ಮನೆಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಅದರ ಜೊತೆಜೊತೆಗೆ ಖರೀದಿದಾರರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ನೋಟು ನಿಷೇಧದಿಂದಾಗಿ ಮನೆಗಳ ಮಾರಾಟಕ್ಕೆ ಹೊಡೆತ ಬಿದ್ದಿತ್ತು. ಭಾರತದಾದ್ಯಂತ ಸುಮಾರು 6 ಲಕ್ಷ ಅಪಾರ್ಟ್ಮೆಂಟ್ ಗಳು ಮಾರಾಟವಾಗದೇ ಉಳಿದಿವೆ.
ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಸರ್ಕಾರ, ಸಾಲವನ್ನು ಇನ್ನಷ್ಟು ಅಗ್ಗ ಮಾಡಿದೆ. ಟೈರ್-2, ಟೈರ್-3 ನಗರಗಳ ನಿವಾಸಿಗಳಿಗೂ ಮನೆ ಖರೀದಿಗೆ ಅವಕಾಶ ಸಿಗಲಿ ಅನ್ನೋದು ಸರ್ಕಾರದ ಉದ್ದೇಶ. ದಕ್ಷಿಣ ಭಾರತದ ಹಲವು ನಗರಗಳು ಸೇರಿದಂತೆ, ಪುಣೆ, ಚಂಡೀಗಢ ಮತ್ತು ಲುಧಿಯಾನಾದಲ್ಲಿ ಮನೆಗಳ ಮಾರಾಟ ಹೆಚ್ಚುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here