ಬೆಂಗಳೂರು: ಸಮಗ್ರ ಕರ್ನಾಟಕ ಹಾಗೂ ಎಲ್ಲ ಜನರ ಆಶೋತ್ತರವನ್ನು ಪ್ರತಿಬಿಂಬಿಸುವ ಆಯ- ವ್ಯಯವನ್ನು ನಾನು ಸದನದಲ್ಲಿ ಮಂಡಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ .ಇದು ನಾನು ಮಂಡಿಸುತ್ತಿರುವ ಎರಡನೆಯ ಬಜೆಟ್ ಆಗಿದೆ. ವಿಧಾನಸಭೆಯ ಘನತೆ, ಗೌರವ ಹಾಗೂ ಪಾವಿತ್ರ್ಯತೆಯನ್ನು ಎಲ್ಲ ಗೌರವಾನ್ವಿತ ಸದಸ್ಯರು ಎತ್ತಿಹಿಡಿಯುತ್ತಾರೆ ಎಂದು ನಾನು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.










