ಸಂಪನ್ಮೂಲ ಹೇಗೆ ಕ್ರೂಢೀಕರಣ ಮಾಡಬೇಕು ಎಂಬುದನ್ನು ಈ ಹಿಂದೆ 20ತಿಂಗಳು ಆಡಳಿತ ಮಾಡಿದ ನನಗೆ ಗೊತ್ತು.-ಮುಖ್ಯಮಂತ್ರಿ ಕುಮಾರಸ್ವಾಮಿ.

314

ಬೆಂಗಳೂರು- ಹೊಸ ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿದ್ದು, ಲೋಕಸಭೆ ಚುನಾವಣೆ ನಂತರ ಹೊಸ ಬಜೆಟ್ ಮಂಡನೆ ಮಾಡಿ ಎಂಬ ಅಭಿಪ್ರಾಯ ಬರುತ್ತಿದೆ. ಜುಲೈ 5ಕ್ಕೆ ಬಜೆಟ್ ಮಂಡನೆ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಾಲಮನ್ನಾ ವಿಚಾರ ಸಂಬಂದಿಸಿದಂತೆ ನಾನು ಬೇರೊಬ್ಬರ ಬಳಿ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ.ನನಗೆ ನನ್ನದೇಯಾದ ಬದ್ದತೆ ಇದೆ.ಅದರಿಂದಲೆ ಚುನಾವಣೆಗೂ ಮುನ್ನ ಜನತೆಗೆ ನೀಡಿದ ಆಶ್ವಾಸನೆಯಂತೆ ಸಾಲ ಮನ್ನಾ ಮಾಡಲು ಮುಂದಾಗಿದ್ದೇನೆ ಎಂದರು.ಸಂಪನ್ಮೂಲ ಹೇಗೆ ಕ್ರೂಢೀಕರಣ ಮಾಡಬೇಕು ಎಂಬುದನ್ನು ಈ ಹಿಂದೆ 20ತಿಂಗಳು ಆಡಳಿತ ಮಾಡಿದ ನನಗೆ ಗೊತ್ತು. ಬಜೆಟ್ ಮಂಡಿಸಲು ನಾನು ರಾಹುಲ್ ಗಾಂಧಿ ಅವರ ಬಳಿ ಅನುಮತಿ ಪಡೆದಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ನಾವು ತಿರ್ಮಾನ ತೆಗೆದುಕೊಂಡಿರುವುದು ಆದರೆ ಯಾವ ಕಾರಣಕ್ಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.