ಮೂರನೇ ಏಕದಿನ ಪಂದ್ಯ- 13 ರನ್ ಗಳ ಅಂತರದಿಂದ ಗೆದ್ದು ಬೀಗಿದ ಭಾರತ…

258
firstsuddi

ಕ್ಯಾನ್ಬೆರಾ : ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್ ಗಳಿಂದ ಜಯಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ 302 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಟಿ. ನಟರಾಜನ್, ಶಾರ್ದೂಲ್ ಠಾಕೂರ್ ಹಾಗೂ ಬುಮ್ರಾ ಬೌಲಿಂಗ್ ದಾಳಿಗೆ ನಲುಗಿ ಹೋಯಿತು.

ಭಾರತದ ಪರವಾಗಿ ಆರಂಭಿಕ ಆಟಗಾರರಾದ ಶೇಖರ್ ಧವನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಹಾಗೂ ಕೆ.ಎಲ್. ರಾಹುಲ್ ಉತ್ತಮ ರನ್ ಕಲೆ ಹಾಕಲು ವಿಫಲರಾದರು. ಬಳಿಕ ನಾಯಕ ವಿರಾಟ್ ಕೊಹ್ಲಿ (63), ಹಾರ್ದಿಕ್ ಪಾಂಡ್ಯ (92), ರವೀಂದ್ರ ಜಡೇಜಾ (66) ರನ್ ಗಳಿಸುವ ಮೂಲಕ ಭಾರತ ತಂಡ ಉತ್ತಮ ರನ್ ಕಲೆ ಹಾಕಲು ನೆರವಾಯಿತು.

ಆಸ್ಟ್ರೇಲಿಯಾ ಪರ ಗ್ರೀನ್ 21, ಕೆರ್ರಿ 38, ಹೆನ್ರಿಕ್ಸ್ 22, ಆರೋನ್ ಪಿಂಚ್ 75, ಮ್ಯಾಕ್ಸ್ ವೆಲ್ 59, ಅಗರ್ 28 ರನ್ ಬಾರಿಸಿದ್ದಾರೆ. ಭಾರತ ಪರ ಬೌಲಿಂಗ್ ನಲ್ಲಿ ಶಾರ್ದೂಲ್ ಠಾಕೂರ್ 3, ಜಸ್ ಪ್ರೀತ್ ಬುಮ್ರಾ, ನಟರಾಜನ್ ತಲಾ 2 ವಿಕೆಟ್ ಪಡೆದಿದ್ದಾರೆ.
ಮೊದಲ ಎರಡು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯಗಳಿಸಿದ್ದು, ಈ ಸರಣಿಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.