ಲಂಡನ್: ಭಾರತೀಯ ಮೂಲದ ಕ್ರಿಕೆಟಿಗ ಇಬ್ಬರು ಮಹಿಳೆಯರಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಡರ್ಬಿಶೈರ್ ಕ್ರಿಕೆಟ್ ಕ್ಲಬ್ನ ಆಲ್-ರೌಂಡರ್ ಮತ್ತು ಇಂಗ್ಲೆಂಡ್ನ ಅಂಡರ್ 19 ತಂಡದ ಮಾಜಿ ನಾಯಕ ಶಿವ್ ಠಾಕೂರ್ ಅವರು ಮಹಿಳೆಯರ ಮುಂದೆ ಗುಪ್ತಾಂಗ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಜೂನ್ನಲ್ಲಿ ಬಂಧನಕ್ಕೊಳಗಾಗಿದ್ದರು.
‘ಶಿವ್ ಠಾಕೂರ್ ವರ್ತನೆಯಿಂದ ಇಬ್ಬರು ಅಮಾಯಕ ಮಹಿಳೆಯರಿಗೆ ತೊಂದರೆಯಾಗಿದೆ’ ಎಂದು ದಕ್ಷಿಣ ಡರ್ಬಿಶೈರ್ ಮಾಜಿಸ್ಟ್ರೇಟ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ‘ಠಾಕೂರ್ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದೋಷಿ ಎಂದು ಘೋಷಿಸಲಾಗಿದೆ’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಡ್ರ್ಯೂ ಮೆಚಿನ್ ತೀರ್ಪು ಪ್ರಕಟಿಸಿದ್ದಾರೆ. ಡರ್ಬಿಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಶಿವ್ ಠಾಕೂರ್ ಅವರ ವೇತನವನ್ನು ಅಮಾನತುಗೊಳಿಸಿತ್ತು