ಹಾಸನ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರು ರಕ್ಷಣಾ ಸಚಿವೆ ನಿರ್ಮಲ ಸೀತರಾಮನ್ ಅವರ ಕೊಡುಗು ಭೇಟಿ ವೇಳೆಯ ವರ್ತನೆಯನ್ನು ಟೀಕಿಸುತ್ತಿದ್ದರೆ, ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರು ನಿರ್ಮಲ ಸೀತಾರಾಮನ್ ಅವರ ವಿರುದ್ದ ಟೀಕೆ ಮಾಡುವುದು ಸರಿಯಲ್ಲ. ಕೊಡಗು ಜಿಲ್ಲೆ ಭೇಟಿ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಸಂಸದರ ನಿಧಿಯಿಂದ 1 ಕೋಟಿ ರೂ ಹಾಗೂ ರಕ್ಷಣಾ ಇಲಾಖೆಯಿಂದ 6 ಕೋಟಿ ರೂ ಸೇರಿ ಒಟ್ಟು 7 ಕೋಟಿ ರೂ ಪರಿಹಾರ ಘೋಷಿಸಿದ್ದಾರೆ.ರಾಜ್ಯ ಅಭಿವೃದ್ದಿ ಯೋಜನೆಯಲ್ಲಿ ಕೇಂದ್ರ ಸಚಿವರು ಉದಾರತೆಯಿಂದ ನಡೆದುಕೊಂಡಿದ್ದಾರೆ ಎಂದು ಪ್ರಶಂಶಿಸಿದ್ದಾರೆ.