ಕಡೂರು:ಎಟಿಎಂ ಕಾರ್ಡ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ…

315
firstsuddi

ಚಿಕ್ಕಮಗಳೂರು: ಎಟಿಎಂ ಕಾರ್ಡ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ಉಳಕಿನಕಲ್ಲು ಬಳಿ ನಡೆದಿದ್ದು, ತಮಿಳುನಾಡು ಮೂಲದ ವಿಜಿ(31), ತರೀಕೆರೆ ಮೂಲದ ಪ್ರವೀಣ್(30) ಎಂಬ ಆರೋಪಿಗಳು ಶಿವಮೊಗ್ಗದ 2 ಎಟಿಎಂಗಳಲ್ಲಿ ಹಾಗೂ ಕಡೂರು ಪಟ್ಟಣದ 1 ಎಟಿಎಂನಲ್ಲಿ ಕಳ್ಳತನ ಮಾಡಿದ್ದು, ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಆರೋಪಿಗಳಿಂದ ವಿವಿಧ ಬ್ಯಾಂಕ್ ನ 5 ಎಟಿಎಂ ಕಾರ್ಡ್,1.10 ಲಕ್ಷ ನಗದು,ಒಂದು ಕಾರು, ಒಂದು ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದು , ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.