ಖಾಸಗಿ ಬಸ್ ಡಿಕ್ಕಿ, ಸಾಕಾನೆ ರಂಗ ಸಾವು…

268
firstsuddi

ಕೊಡಗು: ಸಾಕಾನೆಯೊಂದಕ್ಕೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಸೊಂಟ ಮುರಿದು ಆನೆ ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆಗಳ ಶಿಬಿರದಲ್ಲಿ ನಡೆದಿದೆ. ಮತ್ತಿಗೋಡು ಆನೆಕ್ಯಾಂಪ್ನಲ್ಲಿರುವ 45 ವರ್ಷದ ರಂಗ ಎಂಬ ಹೆಸರಿನ ಆನೆಯನ್ನು ಎಂದಿನಂತೆ ಕಳೆದ ರಾತ್ರಿಯೂ ತಿರುಗಾಡಲು ಬಿಡಲಾಗಿತ್ತು. ಸುಮಾರು ರಾತ್ರಿ 2 ಗಂಟೆ ಸುಮಾರಿಗೆ ಈ ಮಾರ್ಗದಲ್ಲಿ ಬಂದ ಖಾಸಗಿ ಬಸ್ ಆನೆಗೆ ಡಿಕ್ಕಿ ಹೊಡೆದ ಪರಿಣಾಮ  ಆನೆಯ ಸೊಂಟ ಮುರಿದು ತೀವ್ರ ಗಾಯಗೊಂದ್ದು,  ನಂತರ ಆನೆಗೆ ಪಶು ವೈದ್ಯ ಡಾ. ಮುಜೀಬ್ ಚಿಕಿತ್ಸೆ ನೀಡಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನೆ ಸಾವನ್ನಪ್ಪಿದ್ದು,  ಇನ್ನು ಎರಡು ದಿನಗಳಲ್ಲಿ ದಸರಾದಲ್ಲಿ ಪಾಲ್ಗೊಳ್ಳಲು ತೆರಳಬೇಕಾಗಿದ್ದ ಆನೆ ಇದಾಗಿತ್ತು. ಖಾಸಗಿ ಬಸ್ ಚಾಲಕನ ವಿರುದ್ಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.