ಕಂಪ್ಲಿ ಶಾಸಕ ​ ಗಣೇಶ್ ಬಂಧನ…

235
firstsuddi

ಬೆಂಗಳೂರು:  ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕಂಪ್ಲಿ ಶಾಸಕ ಜೆ. ಎನ್​ ಗಣೇಶ್​ ಅವರನ್ನು ಪೊಲೀಸರು ಇಂದು ಬಂಧಿಸಿದ್ದು, ಈಗಲ್​ಟನ್​ ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದ್ದ ಗಣೇಶ್ ಮೇಲೆ ಎಫ್‌ಐಆರ್ ದಾಖಲಾಗಿತ್ತು.ಅಂದಿನಿಂದ ಕಂಪ್ಲಿ ಶಾಸಕ ಗಣೇಶ್ ಅವರು ತಲೆ ಮರೆಸಿಕೊಂಡಿದ್ದರು. ಹೊರ ರಾಜ್ಯದಲ್ಲಿ ಗಣೇಶ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದ್ದು, ಇಂದು ರಾತ್ರಿ ಗಣೇಶ್ ಅವರನ್ನು ರಾಮನಗರಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.