ತರಗತಿಯಲ್ಲೇ ಮದ್ಯ ಸೇವಿಸಿ ಶಿಕ್ಷಕರಿಗೆ ಸಿಕ್ಕಿಬಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿನಿಯರು…

358
firstsuddi

ಹೈದರಾಬಾದ್: ವಿದ್ಯಾರ್ಥಿನಿಯರಿಬ್ಬರು ತರಗತಿ ನಡುವೆಯೇ ಮದ್ಯ ಸೇವನೆ ಮಾಡಿ ಶಿಕ್ಷಕರಿಗೆ ಸಿಕ್ಕಿಬಿದ್ದ ಘಟನೆ ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ತಂಪು ಪಾನೀಯದ ಬಾಟಲಿಗೆ ಮದ್ಯ ಬೆರೆಸಿ ತಂದಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಂತೆ ಕುಡಿದಿದ್ದಾರೆ. ಬಳಿಕ ತರಗತಿಯಲ್ಲೇ ಜೋರು ಜೋರಾಗಿ ಮಾತನಾಡಲು ಶುರು ಮಾಡಿದ್ದಾರೆ.

firstsuddi

ಇದರಿಂದ ಅನುಮಾನಗೊಂಡ ಶಿಕ್ಷಕರು ಅವರ ತಂಪು ಪಾನೀಯದ ಬಾಟಲಿಯನ್ನು ಪರಿಶೀಲಿಸಿದಾಗ ಅವರ ಬಾಟಲಿಯಲ್ಲಿ ಮದ್ಯ ವಾಸನೆ ಬಂದಿದ್ದು, ವಿದ್ಯಾರ್ಥಿನಿಯರು ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿ ತಕ್ಷಣವೇ ಶಾಲೆಯಿಂದ ವಿದ್ಯಾರ್ಥಿನಿಯರಿಬ್ಬರನ್ನು ಅಮಾನತುಗೊಳಿಸಿದ್ದಾರೆ. ಈ ಘಟನೆ ಕುರಿತು ಪ್ರತಿಕ್ರಯಿಸಿದ ಮುಖ್ಯೋಪಾಧ್ಯಾಯರಾದ ಸುರೇಶ್ ಕುಮಾರ್ ಅವರು ದಿನನಿತ್ಯ ನಮ್ಮ ತಂದೆ ಮನೆಯಲ್ಲಿಯೇ ಕುಡಿಯುತ್ತಾರೆ. ಉಳಿದ ಮದ್ಯದ ಬಾಟಲಿಗಳನ್ನು ಮನೆಯಲ್ಲಿಯೇ ಇಟ್ಟಿರುತ್ತಾರೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ನಾವು ಅದನ್ನು ಕುಡಿದು ಅದು ಹವ್ಯಾಸವಾಗಿ ಬೆಳೆಯಿತೆಂದು ಎಂದು ವಿದ್ಯಾರ್ಥಿನಿಯರು ವಿವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.