ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ, ಮುಖ್ಯಮಂತ್ರಿ ಕುಮಾರಸ್ವಾಮಿ.

442
firstsuddi

ಬೆಂಗಳೂರು- ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಜನತಾ ದರ್ಶನ ನಡೆಸುವುದರ ಬಗ್ಗೆ ಚಿಂತನೆ ಮಾಡಿರುವುದಾಗಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಜನತಾ ದರ್ಶನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಎಲ್ಲಾ ಜಿಲ್ಲೆಯಿಂದಲೂ ಅಹ್ವಾಲುಗಳನ್ನು ಗಮನಿಸಿದ್ದೇನೆ, ಹಲವು ಜನಗಳಿಗೆ ಬೆಂಗಳೂರಿಗೆ ತಲುಪಲು ಕಷ್ಠವಾಗುತ್ತದೆ. ಇದರಿಂದ ನಾನೇ ಪ್ರತಿ ಜಿಲ್ಲೆಗೆ ಭೇಟಿ ನೀಡಿದರೆ ಅನುಕೂಲವಾಗುತ್ತದೆ ಎಂದರು.
ರಾಜ್ಯದ ಎಲ್ಲೇಡೆಯಿಂದ ಹಲವು ಸಮಸ್ಯೆಗಳು ಜನತಾ ದರ್ಶನದ ಮೂಲಕ ತಿಳಿಯುತ್ತಿದ್ದು, ಮುಖ್ಯಮಂತ್ರಿಗಳು ಏನಾದರು ಒಳಿತು ಮಾಡುತ್ತಾರೆ ಎಂಬ ನಂಬಿಕೆ ಇಟ್ಟು ಬರುತ್ತಿದ್ದಾರೆ. ಯಾವುದೇ ಅರ್ಜಿ ಬಂದರು ಅದನ್ನು ಪರಿಶೀಲಿಸಿ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನಾನು ಮುಖ್ಯಮಂತ್ರಿಯಾಗಿರುವುದು ರೈತರ ಹಾಗೂ ಬಡ ಜನರ ಕೆಲಸ ಮಾಡಲು ಎಂದು ಹೇಳಿದರು.