ಮೈಸೂರು-ಬಿಜೆಪಿ ಅವರು ಮಾಡಿರುವ ಸಮ್ಮಿಶ್ರ ಸರ್ಕಾರದ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಅವಧಿಯಲ್ಲಿ ವರ್ಗಾವಣೆ ಮಾಡ್ಲಿಲ್ವ? ಅವರು ವರ್ಗಾವಣೆ ಮಾಡುವಾಗ ದಂಧೆ ಮಾಡಿದ್ರ? ಎಂದು ಪ್ರಶಿಸಿದ್ದು,ದಂಧೆ ಬಗ್ಗೆ ಮಾಹಿತಿ ಇದ್ರೆ ದಾಖಲೆ ಕೊಡಲಿ ಬದಲಾಗಿಆರೋಪ ಮಾಡುವುದು ಬೇಡ, ಹಾಗೂ ವರ್ಗಾವಣೆ ಆಡಳಿತದ ಒಂದು ಭಾಗ ದಂಧೆ ಎಲ್ಲಿಂದ ಬಂತು. ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿ.ಜೆ.ಪಿ ಆರೋಪಕ್ಕೆ ತಿರುಗೇಟು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.