ಕೊಪ್ಪ- ನಕಲಿ ಸಾಗುವಳಿ ಚೀಟಿ ನೀಡಿ ವಂಚಿಸುತ್ತಿದ್ದ ಕೊಪ್ಪ ಪಟ್ಟಣದ ಕೆ. ಮಹ್ಮದ್ ಎಂಬುವವರನ್ನು ಬಂದಿಸಿದ್ದು , ಅರುಂಧತಿ ಎಂಬುವವರಿಂದ 20 ಸಾವಿರ ಹಣ ಪಡೆದು ಸಾಗುವಳಿ ಚೀಟಿ ನೀಡಿದ್ದು, ತಹಶೀಲ್ದಾರ್ ರ ನಕಲಿ ಸೀಲ್, ಸಹಿ ಹಾಕಿ ವಂಚಿಸಿದ್ದು, ನಕಲಿ ಸಾಗುವಳಿ ಚೀಟಿ ನೀಡುವುದರ ಜೊತೆ ಶಾಸಕ ಟಿ.ಡಿ ರಾಜೇಗೌಡ ಹೆಸರು ಬಳಕೆ ಮಾಡಿದ್ದು, ಸಾಗುವಳಿ ಚೀಟಿಯಲ್ಲಿ ಸೀಲ್ ಸರಿಯಾಗಿ ಬಿದ್ದಿಲ್ಲದ ಹಿನ್ನಲೆ ಅನುಮಾನಗೊಂಡ ಅರುಂಧತಿ ತಾಲೂಕು ಕಛೇರಿಗೆ ದೂರು ನೀಡಿದ್ದು,ಸಾಗುವಳಿ ಚೀಟಿಯಲ್ಲಿದ್ದ ಸಹಿ ತಹಶೀಲ್ದಾರ್ ನನ್ನ ಸಹಿ ಅಲ್ಲ ಎಂದು ಖಚಿತಪಡಿಸಿದ್ದು,
ಅರುಂಧತಿ ಅವರಿಗೆ ನೀಡಿದ ಸಾಗುವಳಿ ಚೀಟಿಯಲ್ಲಿ ಸರ್ವೆ ನಂ 130 ಕೂಡ ನಕಲಿಯಾಗಿದ್ದು,ಸರ್ಕಾರಿ ದಾಖಲೆಯಲಿ ಹರಂದೂರು ಸರ್ವೆ ನಂ 65 ಎಂದು ನಮೂದಾಗಿದ್ದು, ಸಾಗುವಳಿ ಪತ್ರ, ಬ್ಯಾಂಕ್, ಚಲನ್ ಎಲ್ಲ ನಕಲಿ ಎಂದು ತಾಲೂಕು ಕಛೇರಿ ಅಧಿಕಾರಿಗಳು ಸಾಬೀತುಪಡಿಸಿದ್ದು ,ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.