ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಹಿಂದೆ ಹಲವಾರು ಅನುಮಾನಗಳು?

262
firstsuddi

ಉಡುಪಿ- – ಉಡುಪಿಯ ಅಷ್ಟಮಠಗಳಲ್ಲೊಂದಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಇಂದು ಬೆಳಗ್ಗೆ ವಿಧಿವಶರಾಗಿದ್ದು ಅವರ ಸಾವು ನಿಗೂಡವಾಗಿದ್ದು, ವಿಷ ಪ್ರಾಷನವಾಗಿದೆಯೋ ಅಥವಾ ಸ್ವಾಮೀಜಿ ಸೇವಿಸಿದ ಆಹಾರ ವಿಷವಾಗಿದೆಯೋ ಎಂಬ ಶಂಕೆ ವ್ಯಕ್ತವಾಗಿದ್ದು. ಶ್ರೀಗಳ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು. ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಅವರು ಸೇವಿಸಿರುವ ಆಹಾರ ವಿಷವಾಗಿರಬಹುದು ಅಥವಾ ವಿಷಪ್ರಾಸನವಾಗಿರಬಹುದು ಎಂಬ ಅನುಮಾನವಿದ್ದು, ಪಟ್ಟದೇವರ ವಿಷಯದಲ್ಲಿ ಅಷ್ಟ ಮಠದ ವಿರುದ್ಧ ಶ್ರೀಗಳು ತಿರುಗಿ ಬಿದ್ದಿದ್ದರು. ವಿಠಲನ ಮೂರ್ತಿಯನ್ನು ಹಿಂದಿರುಗಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕಾನೂನು ಹೋರಾಟ ಮಾಡುವುದಾಗಿಯೂ ಕಳೆದೆರೆಡು ದಿನಗಳ ಹಿಂದೆ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ್ದ ಅವರು ರಾಜಕೀಯದಲ್ಲಿಯೂ ಆಸಕ್ತಿ ಹೊಂದಿದ್ದ ಶ್ರೀಗಳು ಬಿಜೆಪಿ ಸೇರಲು ಮುಂದಾಗಿದ್ದರು. ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ನಾಮಪತ್ರ ವಾಪಸ್ ಪಡೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದ್ದಕ್ಕಿದ್ದಂತೆ ಶ್ರೀಗಳು ಸಾವನ್ನಾಪ್ಪಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.