ಬಣಕಲ್:ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಪ್ರೋತ್ಸಾಹದ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ನಿಡುವಾಳೆ ರಾಮೇಶ್ವರ ದೇವಸ್ಥಾನದ ಆಡಳಿತದಾರರಾದ ಸುನೀಲ್ ಜೆ ಗೌಡ ಹೇಳಿದರು.
ಸೋಮವಾರ ನಿಡುವಾಳೆ ರಾಮೇಶ್ವರ ದೇವಸ್ಥಾನದಲ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನಿ ವಿತರಣೆ ಮಾಡಿ ಮಾತನಾಡಿದರು.
ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳಿಗೆ ಕುತೂಹಲ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇದ್ದರೂ ಕೂಡ ಬಡತನ ಮುಂತಾದ ಕೆಲ ಕಾರಣಗಳಿಂದ ಶಿಕ್ಷಣವನ್ನು ಪಡೆಯಲು ಸಾದ್ಯವಾಗುತ್ತಿಲ್ಲ. ಶಿಕ್ಷಣ ಮತ್ತು ಕ್ರೀಡಾಚಟುವಟಿಕೆಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ಆಸಕ್ತಿಯಿಂದ ತೊಡಗಿಸಿಕೊಳ್ಳುವಂಥ ವಾತಾವರಣ ನಿರ್ಮಿಸಬೇಕಿದೆ ಎಂದರು.
ರಾಮೇಶ್ವರ ದೇವಸ್ಥಾನ ಸಮಿತಿ ಖಜಾಂಚಿಗಳಾದ ಎನ್.ಆರ್. ನಾಗರಾಜ್ ಭಟ್, ಅರ್ಚಕರಾದ ರವಿಪ್ರಕಾಶ್ ಭಟ್, ಸ್ಥಳೀಯರಾದ ಕೃಷ್ಣಪ್ಪ, ರವಿ, ವೀಣಾನಾಗರಾಜ್ ಭಟ್ ಮೊದಲಾದವರು ಹಾಜರಿದ್ದರು.