ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಸಮೃದ್ಧ,ಸಮಗ್ರ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಹೊಸವರ್ಷವನ್ನು ಸ್ವಾಗತಿಸೋಣ.ರೈತರ ಮೊಗದಲ್ಲಿ ತೃಪ್ತಿಯನಗು, ನಿರುದ್ಯೋಗಿಗಳಲ್ಲಿ ಕಣ್ಣಲ್ಲಿ ಭರವಸೆಯ ಬೆಳಕು, ದುರ್ಬಲ ವರ್ಗದವರ ಎದೆಯಲ್ಲಿ ಭದ್ರತೆಯ ಭಾವ,ಹಳ್ಳಿ-ಪಟ್ಟಣ-ನಗರಗಳಲ್ಲಿ ಅಭಿವೃದ್ಧಿಯ ಹೊಂಗನಸು ಸಾಕಾರಗೊಳಿಸುವ ನಿಶ್ಚಯದೊಂದಿಗೆ ಹೊಸವರ್ಷಕ್ಕೆ ಅಡಿಯಿಡುವ.ಯಶಸ್ಸು ನಮ್ಮೆಲ್ಲರದಾಗಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.











