ಈ ಲಕ್ಷಣಗಳು ಕಂಡು ಬಂದರೆ “ಕಿಡ್ನಿ”ಯಲ್ಲಿ  ಸಮಸ್ಯೆ ಇದೆ ಎಂದರ್ಥ! ಹಾಗಾದ್ರೆ ಕೂಡಲೇ ಎಚ್ಚೆತ್ತುಕೊಳ್ಳಿ…

5316

ದೇಹದಲ್ಲಿ ಪದೇ ಪದೇ ನಿಶ್ಯಕ್ತಿ ಕಾಡುತ್ತಿದ್ದರೆ, ಕೆಲಸ ನಿರ್ವಹಿಸಲು ಶಕ್ತಿ ಕಡಿಮೆಯಾದರೆ ನಿವೊಮ್ಮೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ರಕ್ತದಲ್ಲಿ ವಿಷಕಾರಿ ಅಂಶಗಳು ಹಾಗೂ ಕಲ್ಮಶಗಳು ತುಂಬಿಕೊಳ್ಳುವುದು ಕಿಡ್ನಿ ವೈಫಲ್ಯದ ಲಕ್ಷಣಗಳು.. ಇದರಿಂದ ನಿಶ್ಯಕ್ತಿ ಮತ್ತು ಬಲಹೀನತೆ ಉಂಟಾಗುತ್ತದೆ

ಚರ್ಮದಲ್ಲಿ ತುರಿಕೆ ಹಾಗೂ ಕಾಂತಿ ಹೀನತೆ

ಸದಾ ಚರ್ಮದಲ್ಲಿ ತುರಿಕೆ ಮತ್ತು ಗುಳ್ಳೆಗಳು ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ಇದು ಚರ್ಮದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಇದರಿಂದ ಚರ್ಮ ಕೆಂಪಾಗುವುದು ಹಾಗೂ ತುರಿಕೆ ಉಂಟಾಗುತ್ತದೆ. ಅಲ್ಲದೇ ನಿಮ್ಮ ಚರ್ಮವು ದಿನದಿಂದ ದಿನಕ್ಕೆ ಕಾಂತಿ ಹೀನವಾಗುತ್ತದೆ.

ವಾಂತಿ ಮತ್ತು ವಾಕರಿಕೆ

ಸದಾ ಬಾಯಲ್ಲಿ ವಾಕರಿಕೆ ಉಂಟಾಗಿ ಊಟದ ವಾಸನೆ ಬಂದರೆ ಏಸಿಗೆ ಬರುತ್ತದೆ. ಮತ್ತು ವಾಂತಿ, ವಾಕರಿಗೆ ಬಂದಂತೆ ಆಗುತ್ತದೆ. ಇದರಿಂದ ನಿಶ್ಯಕ್ತಿ ಉಂಟಾಗಿ ದೇಹವು ಮತ್ತಷ್ಟು ಬಲ ಹೀನವಾಗುತ್ತದೆ.

ರಾತ್ರಿ ವೇಳೆ ಅತೀಯಾದ ಮೂತ್ರ ಬಾಧೆ : ರಾತ್ರಿ ವೇಳೆ ಆಗಾಗ ಮೂತ್ರ ಬಾಧೆ ಉಂಟಾಗುವುದು. ರಾತ್ರಿ ವೇಳೆ ನಿದ್ರೆ ಇಲ್ಲದೆ ಮೂತ್ರ ವಿಸರ್ಜನೆಯಲ್ಲೇ ಕಾಲ ಕಳೆಯುವುದು ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣಗಳಾಗಿವೆ.

ಮೂತ್ರದ ಬಣ್ಣದಲ್ಲಿ ಬದಲಾವಣೆ: ಹೌದು ಮೂತ್ರದ ಬಣ್ಣದಲ್ಲಿ ಬದಲಾವಣೆಯೂ ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದು.  ಅಲ್ಲದೆ ಕೈ ಹಾಗೂ ಪಾದ ಊದಿಕೊಳ್ಳುವುದು ಕೂಡಾ ಕಿಡ್ನಿ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದು. ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ದೇಹದಲ್ಲಿ ಹೆಚ್ಚಿನ ಸೋಡಿಯಂ ಸೇರಿಕೊಳ್ಳುತ್ತದೆ. ಬಳಿಕ ಪಾದ ಹಾಗೂ ಕೈಗಳು ಉದಿಕೊಳ್ಳಲು ಆರಂಭವಾಗುತ್ತದೆ. ಮೂತ್ರದ ಸಮಸ್ಯೆ  ಕಾಡಿದೊಡನೆ ಕೂಡಲೇ ವೈದ್ಯದ ಬಳಿ ತೆರಳಿ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಅಲ್ಲದೆ ಕೆಲ ದಿನಗಳ ಬಳಿಕವೂ ಮೂತ್ರದ ಬಣ್ಣ ಬದಲಾವಣೆ ಕಾಣದಿದ್ದರೆ ಬಣ್ಣವನ್ನು ನೀವು ಪರಿಶೀಲನೆ ಮಾಡಬೇಕಾಗುತ್ತದೆ. ಅಲ್ಲದೆ ಬಾಯಲ್ಲಿ ಸದಾ ಕೆಟ್ಟ ವಾಸನೆ ಬೀರುತ್ತದೆ. ನಿಮ್ಮ ಮೂತ್ರದ ಬಣ್ಣ ಗಾಢ ವರ್ಣಕ್ಕೆ ತಿರುಗಿದೆ ಎಂದಾದರೆ ಕಿಡ್ನಿ ಸಮಸ್ಯೆ ಇದೆ ಎಂಬುವುದು ತಿಳಿಯುತ್ತದೆ. ಹಸಿವು ಇಲ್ಲದೆ ದೇಹದಲ್ಲಿರುವ ಕಲ್ಮಶಗಳನ್ನು ಕಿಡ್ನಿಯು ಫಿಲ್ಟರ್ ಮಾಡುವಲ್ಲಿ ವಿಫಲಗೊಂಡಾಗ ಹಸಿವು ಕಾಣಿಸುವುದಿಲ್ಲ.

LEAVE A REPLY

Please enter your comment!
Please enter your name here