ಪದೇ ಪದೇ ಸ್ನಾನ ಮಾಡುವುದರಿಂದ ದೇಹದಲ್ಲಿನ ಪ್ರತಿರೊಧಕ ಶಕ್ತಿ ಕುಗ್ಗುತ್ತದೆ..!!?

908

firstsuddi: ಪ್ರತೀ ದಿನವು ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಚೈತನ್ಯದಿಂದ ಕೂಡಿರುತ್ತದೆ ಅನ್ನುವುದರಲ್ಲಿ ಬೇರೆ ಮಾತಿಲ್ಲ. ಆದರೆ ಪದೇ ಪದೇ ಸ್ನಾನ ಮಾಡಿದರೆ ಅನಾರೋಗ್ಯಕ್ಕೀಡಾಗುತ್ತಾರೆ. ಎಂದು ಉಟಾ ಯೂನವರ್ಸಿಟಿಯ ಸಂಶೋಧಕರು ತಿಳಿಸಿದ್ದಾರೆ. ಅದೇನೋ ಅಂತಾರಲ್ಲ ಅತೀಯಾದರೆ ಅಮೃತವು ವಿಷವಾಗುತ್ತೆ ಅಂತಾ..

ನಮ್ಮ ದೇಹದಲ್ಲಿರುವ ಬ್ಯಾಕ್ಟಿರಿಯ, ವೈರಸ್ ಮತ್ತು ಮೈಕ್ರೋಬ್‍ಗಳು ದೇಹದ ವಿವಿಧ ಪ್ರಕ್ರಿಯೆಗೆ ಕೆಲಸ ಮಾಡುತ್ತದೆ. ನಮ್ಮ ದೇಹದ ಅನಾರೋಗ್ಯವನ್ನು ತಡೆಗಟ್ಟುವ ಶಕ್ತಿ ಈ ಸೂಕ್ಷ್ಮ ಜೀವಿಗಳಿಗಿರುತ್ತದೆ. ನಾವು ಪದೇ ಪದೇ ಸ್ನಾನ ಮಾಡಿದರೆ ಜೀವಾಣುಗಳ ವ್ಯವಸ್ಥೆ ಏರುಪೇರಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಹಾಗೂ ಹೃದಯದ ಸಮಸ್ಯೆಯು ಉಂಟಾಗಬಹುದು, ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧಕರು ಇದನ್ನು ಅಮೆಜಾನ್ ವ್ಯಾಪ್ತಿಯಲ್ಲಿರುವ ಯಾನೋಮಾಮಿ ಎಂಬ ಗ್ರಾಮದ ಜನರ ಮೇಲೆ ಅಧ್ಯಾಯನ ನಡೆಸಿದ್ದರು. ಈ ಜನರು ತೀರಾ ಅಪರೂಪಕ್ಕೆ ಸ್ನಾನ ಮಾಡುತ್ತಾರೆ, ಹಾಗಾಗಿ ಇವರಲ್ಲಿ ಸೂಕ್ಷ್ಮ ಜಿವಿಗಳ ಕ್ರಿಯೆ ಸರಿಯಾಗಿದ್ದು, ಅವರ ದೈಹಿಕ ಆರೋಗ್ಯ ಕೂಡಾ ಅತ್ಯುತ್ತಮವಾಗಿದೆ ಎಂದು ಪತ್ತೆಹಚ್ಚಿದ್ದಾರೆ..!! ನೋಡಿ ದಿನವೂ ಸ್ನಾನ ಮಾಡಿ ಆರೋಗ್ಯವಾಗಿರೋಣ ನಾವು ಅಂದುಕೊಲ್ಳುತ್ತವೆ ಆದರೆ ಸಂಶೋಧಕರ ಹೊಸ ಹೊಸ ಆವಿಷ್ಕಾರಗಳಿಂದ ಇನ್ನು ಏನೇನೂ ಗೊತ್ತಾಗುತ್ತೋ ಅಲ್ವ.

LEAVE A REPLY

Please enter your comment!
Please enter your name here