ಮಂಗಳೂರು : ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್‍ ಗೆ ಆಟೋ ರಿಕ್ಷಾ ಡಿಕ್ಕಿ-ಚಾಲಕ ಸಾವು, ಮೂವರಿಗೆ ಗಾಯ…

173
firstsuddi

ಮಂಗಳೂರು : ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್‍ ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟಿರುವ ಘಟನೆ ಮರೋಳಿಯಲ್ಲಿ ನಡೆದಿದೆ. ವಳಚ್ಚಿಲ್ ನಿವಾಸಿ ಸಲೀಂ(40) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಹಾಗೂ ಇತರ ಮೂವರು ಆಟೋದಲ್ಲಿ ಮಲ್ಪೆಯಿಂದ ಮೀನು ತುಂಬಿಸುಕೊಂಡು ತೆರಳುತ್ತಿದ್ದ ವೇಳೆ ಮೆರೋಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಬದಿಯಲ್ಲಿ ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದ ಟಿಪ್ಪರ್‍ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಕೂಡಲೇ ಚಾಲಕನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ವ್ಯಕ್ತಿ ಚಿಕಿತ್ಸೆಗೆ ಸ್ಪಂಧಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಗಾಡಿಯಲ್ಲಿದ್ದ ಉಳಿದ ಮೂವರಿಗು ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.