ಮೇಕೆದಾಟು ಯೋಜನೆ:ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದ ಡಿ.ಕೆ.ಶಿವಕುಮಾರ್… 

208
firstsuddi

ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಗೆ  ಪತ್ರ  ಬರೆದಿದ್ದು, ಕಾವೇರಿ ನದಿ ತಮಿಳುನಾಡು ಮತ್ತು ಕರ್ನಾಟಕದ ಜೀವನಾಡಿಯಾಗಿದೆ. ಹಾಗಾಗಿ  ಮೇಕೆದಾಟು ಯೋಜನೆ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.  ಅದಕ್ಕಾಗಿ ತಮಿಳುನಾಡು ಸರ್ಕಾರದ ಜೊತೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ನೀವೇ  ಸೂಕ್ತ ಸಮಯವನ್ನು ನಿಗದಿ ಮಾಡಿ  ಚರ್ಚಿಸೋಣ ಎಂದು ಪತ್ರದಲ್ಲಿ ಬರೆದಿದ್ದಾರೆ.