ಚಿಕ್ಕಮಗಳೂರು- ವಿಧಾನಸಭಾ ಚುನಾವಣೆಯಲ್ಲಿ ಇಪ್ಪತೈದು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಾಲ್ಕನೇ ಬಾರಿಯೂ ಗೆಲ್ಲಿಸಿದ ಚಿಕ್ಕಮಗಳೂರಿನ ಮತದಾರರು ಹಾಗೂ ಕಾರ್ಯಕರ್ತರಿಗೆ ಶಾಸಕ ಸಿ.ಟಿ.ರವಿ ಮಂಡಿಯೂರಿ ನಮಸ್ಕರಿಸಿ ಧನ್ಯವಾದ ಹೇಳಿದ್ದಾರೆ. ಇಂದು ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ವಿಧಾನಸಭಾ ಚುನಾವಣೆ ಅವಲೋಕನ ಹಾಗೂ ಕೃತಜ್ಞತಾ ಸಮಾರಂಭದಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಾರಿ ಸಿ.ಟಿ.ರವಿಗೆ ಸಾಕಷ್ಟು ಪೈಪೋಟಿಯೂ ಇತ್ತು. ಕಾಂಗ್ರೆಸ್ಸಿನಿಂದ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಕಣದಲ್ಲಿದ್ರೆ, ಜೆಡಿಎಸ್ನಿಂದ ಲಿಂಗಾಯಿತ ಮತಗಳೇ ಹೆಚ್ಚಿರೋ ಬಿ.ಎಚ್.ಹರೀಶ್ ಕಣದಲ್ಲಿದ್ರು. ಚುನಾವಣೆ ತೀವ್ರ ಪೈಪೋಟಿಯಿಂದಲೂ ಕೂಡಿತ್ತು. ಈ ನಡುವೆಯೂ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ ಜನತೆಗೆ ಶಾಸಕ ಸಿ.ಟಿ.ರವಿ ಅಭಿನಂದನೆ ಸಲ್ಲಿಸಿದ್ದಾರೆ.