ಬೆಂಗಳೂರು– ಫೆಬ್ರವರಿ 18ರಂದು ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 116 ದಿನ ಜೈಲು ವಾಸ ಅನುಭವಿಸಿದ ನಲಪಾಡ್ ಗೆ ಇಂದು ಅಂತ್ಯವಾಗಿದೆ. ಹ್ಯಾರಿಸ್ ಪುತ್ರ ನಲಪಾಡ್ ಗೆ ಇಂದು ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿದ್ದು, ಇಂದು ಸಂಜೆ ಸುಮಾರು ಐದು ಗಂಟೆಯ ನಂತರ ಜೈಲಿನಿಂದ ಬಿಡುಗಡೆಯ ಸಾಧ್ಯತೆ. ಜೊತೆಗೆ ಹೈಕೋರ್ಟ್‍ನ ಎರಡು ಷರತ್ತುಗಳೊಂದಿಗೆ ನಲಪಾಡ್ ಗೆ ಬಿಡುಗಡೆ. ಮೊದಲನೆಯದು ಕೋರ್ಟ್ ವಿಚಾರಣೆಗೆ ತಪ್ಪಿಸುವಂತಿಲ್ಲ. ಹಾಗೂ ಎರಡನೇ ಷರತ್ತು ಕೋರ್ಟ್ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ಬೇರೆ ಎಲ್ಲೂ ಹೋಗುವಂತಿಲ್ಲ. ಎಂದು ಹೈಕೊರ್ಟ್ ಸೂಚಿಸಿದೆ.ಮತ್ತು ನಲಪಾಡ್ ಪರ ವಕೀಲರಾದ ಬಿ.ಬಿ ಆಚಾರ್ಯ ವಾದಮಂಡಿಸಿದ್ದರು.ಬಿಡುಗಡೆಯಾದ ನಂತರ ಪಟಾಕಿ ಹೊಡೆದು ಸಂಭ್ರಮಿಸುವುದು ಬೇಡ ಎಂದು ಬಿ.ಬಿ.ಆಚಾರ್ಯ ಹೇಳಿದರು.