ಹರಿಯಾಣ- ಸುಮಾರು 120 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಸನ್ಯಾಸಿಯನ್ನು ಹರಿಯಾಣ ಪೊಲೀಸರು ಬಂಧಿಸಿದ್ದು, ಬಾಬಾ ಬಾಲಕನಾಥ್ ದೇವಸ್ಥಾನದ ಬಾಬಾ ಅಮರ್ ಪುರಿ ಬಂಧಿತ ಆರೋಪಿ. ಈತನನ್ನು ಫತೇಬಾದ್ ನ ಪೊಲೀಸರು ಸೆರೆಹಿಡಿದಿದ್ದು, ಈ ಸನ್ಯಾಸಿ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಅವರನ್ನು ಬ್ಲಾಕ್ ಮೇಲ್ ಮಾಡಿ ಮತ್ತೆ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದ್ದು ಈ ವಿಡಿಯೋಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.