ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿಯ ಸಾವು ಪ್ರಕರಣಕ್ಕೆ, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು…

289
firstsuddi

ಉಡುಪಿ- ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಮೂಲದ ರಮ್ಯಾಶೆಟ್ಟಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು. ರಮ್ಯಾ ಅವರು ಉಡುಪಿಯ ಮಣಿಪಾಲದಲ್ಲಿ ನೆಲೆಸಿದ್ದು. ಕಳೆದ ನಾಲ್ಕು ವರ್ಷಗಳಿಂದಲೂ ರಮ್ಯಾ ಅವರು ಶ್ರೀ ಗಳಿಗೆ ಫಲಾಹಾರ ನೀಡುತ್ತಿದ್ದರು ಎನ್ನಲಾಗಿದ್ದು. ಮೂಲ ಮಠದ ನಿರ್ಮಾಣ ಕಾಮಗಾರಿಯ ಉಸ್ತುವಾರಿಯನ್ನು ಇವರೇ ನಿರ್ವಹಿಸುತ್ತಿದ್ದರು. ಪ್ರತಿ ಸೋಮವಾರ ಮಠಕ್ಕೆ ಬರುತ್ತಿದ್ದರು ಎನ್ನಲಾಗಿದ್ದು, ಕೆಲಸದವರಿಗೆ ಸಂಬಳವನ್ನೂ ರಮ್ಯಾ ಅವರೇ ನೀಡುತ್ತಿದ್ದರು ಎಂದೂ ತಿಳಿದು ಬಂದಿದ್ದು. ವಾರಕ್ಕೆ ಎರಡರಿಂದ ಮೂರು ಬಾರಿ ಅವರು ಮಠಕ್ಕೆ ಬಂದು ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.