ಮೂಡಿಗೆರೆ: ತೋಟದ ಕಾರ್ಮಿಕರಿಗೆ ಆತಂಕ ಸೃಷ್ಟಿಸಿದ್ದ ಕಾಳಿಂಗ ಸರ್ಪ ಸೆರೆ…

512

ಮೂಡಿಗೆರೆ: ಕೆಲ ದಿನಗಳಿಂದ ತೋಟದ ಕಾರ್ಮಿಕರಿಗೆ ಆತಂಕ ಸೃಷ್ಟಿಸಿದ್ದ ಕಾಳಿಂಗ ಸರ್ಪವೊಂದು ಸೆರೆಯಾಗಿರುವ ಘಟನೆ ಬಾಳೆಗದ್ದೆ ಗ್ರಾಮದಲ್ಲಿ ನಡೆದಿದೆ. ಮಾಧುಗೌಡ ಎಂಬುವರ ತೋಟದಲ್ಲಿ ಕಾಳಿಂಗ ಸರ್ಪ ಕೆಲ ದಿನಗಳಿಂದ  ತೋಟದ ಕಾರ್ಮಿಕರಿಗೆ  ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದ್ದು, ಇಂದು   ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಳಿಂಗ ಸರ್ಪ  ಕಾಣಿಸಿಕೊಂಡಿದ್ದು, ತಕ್ಷಣ  ತೋಟದ ಮಾಲೀಕ  ಮಾಧುಗೌಡ ಅವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಉರಗ ತಜ್ಞ ಮಹಮ್ಮದ್ ಅವರು  ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದು, ನಂತರ  ಹಾವನ್ನು ಅರಣ್ಯ ಇಲಾಖೆ  ಸಿಬ್ಬಂದಿ ಚಾರ್ಮಾಡಿ ಘಾಟ್ ಗೆ ಬಿಟ್ಟಿದ್ದಾರೆ.