ಕಳೆದ ತಿಂಗಳು ತುಂಗಾ ನದಿ ತಡದಲ್ಲಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಇಂಜಿನಿಯರ್ ಸಂದೀಪ್ ಪತ್ತೆ… 

182
firstsuddi

ಚಿಕ್ಕಮಗಳೂರು :  ಕೇರಳ ಮೂಲದ ಇಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್  ಸಿಕ್ಕಿದ್ದು,  ಕಳೆದ ಒಂದು ತಿಂಗಳ ಹಿಂದೆ   ಕೇರಳದ ಮೂಲದ ಇಂಜಿನಿಯರ್ ಸಂದೀಪ್  ತುಂಗಾ ನದಿ ತಡದಲ್ಲಿ ಕೆ.ಎಲ್ 18, ವಿ 911 ನಂಬರ್ ನ ಬೈಕ್  ನಿಲ್ಲಿಸಿ ನದಿಯಲ್ಲಿ ಮುಳುಗಿ ಸಾವನಪ್ಪಿರೋ ಶಂಕೆ ವ್ಯಕ್ತವಾಗಿತ್ತು. ಆದರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು,  ಸಂದೀಪ್ ಮುಂಬೈನ ಲಾಡ್ಜ್ ವೊಂದರಲ್ಲಿ  ತನ್ನ ಪ್ರೇಯಸಿ ಜೊತೆ ಕೇರಳ ಪೊಲೀಸರಿಗೆ  ಸಿಕ್ಕಿದ್ದು, ಸಂದೀಪ್ ಪ್ರೇಯಸಿ ಹಾಗೂ ಸಂದೀಪ್ ಇಬ್ಬರು ನಾಪತ್ತೆಯಾಗಿರೋ ಬಗ್ಗೆ ಕೇರಳದಲ್ಲಿ ಪ್ರಕರಣ ದಾಖಲಾಗಿತ್ತು.