ಬಹುಉಪಯೋಗಿ ಬಿದಿರು ಕಳಲೆ…

2841
firstsuddi

ಬಿದಿರಿನ ತವರು ಪೂರ್ವ ಹಾಗೂ ಪಶ್ಚಿಮ ಏಷ್ಯಾ ಚಿಗುರೊಡೆದು ಒಂದು ವಾರದ ಒಳಗೆ ಬಿದಿರನ್ನು ಕಳಲೆಯ ರೂಪದಲ್ಲಿ ಆಹಾರ ಖಾದ್ಯಗಳಲ್ಲಿ ಬಳಸಲಾಗುತ್ತದೆ.ಕಳಲೆಯ ರುಚಿಕರವಾದ ಆಹಾರ ಪದಾರ್ಥಗಳು ಸ್ವಾದದೊಂದಿಗೆ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದೆ.
ಹೃದಯ ಸಂಬಂಧಿ ಖಾಯಿಲೆಗಳಲ್ಲಿ ಕಳಲೆಯ ಬಳಕೆ ಪರಿಣಾಮಕಾರಿಯಾಗಿದೆ. ನಮ್ಮ ಜೀರ್ಣವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ಕಳಲೆ ಮೂತ್ರಸಂಬಂಧಿ ವ್ಯಾದಿಗಳು ಹಾಗೂ ಮೂತ್ರಪಿಂಡದ ಸೋಂಕಿನ ನಿವಾರಣೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ. ಸಾಕಷ್ಟು ಪೋಷಕಾಂಶಗಳ ಆಗರವಾಗಿರುವ ಕಳಲೆಯ ಪ್ರಯೋಜನಗಳು ನಮ್ಮನ್ನು ಬೆರಗುಗೊಳಿಸುತ್ತದೆ.
• ದೇಹದಲ್ಲಿ ಶೇಖರವಾಗುವ ಅನಗತ್ಯ ಕೊಬ್ಬನ್ನು ನಿವಾರಿಸುತ್ತದೆ.
• ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟುತ್ತದೆ.
• ದೇಹದ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸುತ್ತದೆ.
• ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆ.
• ದೇಹದಲ್ಲಿ ಉಂಟಾಗುವ ಜ್ವಲನೆಯನ್ನು ತಡೆಗಟ್ಟುತ್ತದೆ.
• ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ.
• ಆರೋಗ್ಯಕರ ಜೀರ್ಣವ್ಯವಸ್ಥೆಯನ್ನು ಹೊಂದಲು ಸಹಕಾರಿಯಾಗಿದೆ.
• ಚರ್ಮದ ಆರೋಗ್ಯಕ್ಕೂ ಅವಶ್ಯವಾಗಿರುವ ಕಳಲೆ ಸುಲಲಿತ ಪ್ರಸವಕ್ಕೂ ದಾರಿಮಾಡಿಕೊಡುತ್ತದೆ.