ಚಿಕ್ಕಮಗಳೂರು – ಚಿಕ್ಕಮಗಳೂರಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹುಡುಕುತ್ತಿದ್ದ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆಯನ್ನ ಅರ್ಧಕ್ಕೆ ಕೈಬಿಟ್ಟಿದೆ. ಭಾರೀ ಮಳೆ, ವೇಗವಾಗಿ ಹರಿಯುತ್ತಿರೋ ನೀರಿನಲ್ಲಿ ಕಾರ್ಯಾಚರಣೆ ನಡೆಸಲಾಗದೆ ವಾಪಸ್ಸಾಗಿದ್ದಾರೆ. ಮುಂದುವರೆದಂತೆ ಸ್ಥಳಿಯರು, ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳಿಂದ ಮೃತದೇಹ ಶೋಧ ಕಾರ್ಯ ಮುಂದುವರೆದಿದೆ. ಸೋಮವಾರ ಸಂಜೆ ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದ ಅಶೋಕ್ ಕೊಪ್ಪ ತಾಲೂಕಿನ ಬಸ್ತಿ ಹಳ್ಳದ ಮೇಲೆ ಗ್ರಾಮಕ್ಕೆ ತೆರಳುತ್ತಿದ್ದ. ಈ ವೇಳೆ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಮಂಗಳವಾರ ಹಳ್ಳದಲ್ಲಿ ಬೈಕ್ ಪತ್ತೆಯಾಗಿತ್ತು. ಕಳೆದ ನಾಲ್ಕು ದಿನಗಳಿಂದ ಹಳ್ಳದಲ್ಲಿ ಮೃತದೇಹಕ್ಕಾಗಿ ಎನ್.ಡಿ.ಆರ್.ಎಫ್ ತಂಡ ಸುರಿಯೋ ಮಳೆಯಲ್ಲೇ ಮೃತದೇಹಕ್ಕಾಗಿ ಶೋಧ ನಡೆಸ್ತಿತ್ತು. ಎನ್.ಡಿ.ಆರ್.ಎಫ್ ತಂಡಕ್ಕೆ ಸ್ಥಳಿಯರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸಾಥ್ ನೀಡಿದ್ರು. ಆದ್ರೆ, ಭಾರೀ ಮಳೆ, ನೀರು ಕೂಡ ವೇಗವಾಗಿ ಹರಿಯುತ್ತಿರೋದ್ರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಕಾರ್ಯಚರಣೆ ನಡೆಸಲಾಗಿದೆ ವಾಪಸ್ಸಾಗಿದೆ.
Home ನಮ್ಮ ಮಲ್ನಾಡ್ ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಹುಡುಕಲು ಬಂದಿದ್ದ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆಯನ್ನು ...