ಕಣ್ಮುಚಿ ಕುಳಿತ ಅಧಿಕಾರಿಗಳು, ಕುಸಿಯುವ ಬೀತಿಯಲ್ಲಿ ಚಾರ್ಮಾಡಿ ಘಾಟ್. . .

948
FIRSTSUDDI

ಮೂಡಿಗೆರೆ-ಮಲೆನಾಡು ಭಾಗದಲ್ಲಿ ಬೆಂಬಿಡದೇ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಮಲೆನಾಡಿನಲ್ಲಿ ಆವಾಂತರಗಳು ಸೃಷ್ಟಿಯಾಗುತ್ತಿದ್ದು ರಸ್ತೆಗಳು ಕುಸಿಯತೊಡಗಿದ್ದು . ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿದ್ದು ಆಪದ್ಬಾಂದವ ಚಾರ್ಮಾಡಿ ರಸ್ತೆಯೊಂದೆ ಸಂಚಾರಕ್ಕೆ ಮುಕ್ತವಾಗಿದ್ದು.
ಶಿರಾಡಿ ಘಾಟ್ ರಸ್ತೆಯೂ ಸೇರಿದಂತೆ ಉಳಿದ ಹೆದ್ದಾರಿಗಳಲ್ಲಿ ಸಂಚಾರ ಸಾದ್ಯವಾಗದೆ ಇರುವುದರಿಂದ ಚಾರ್ಮಾಡಿ ಘಾಟ್‍ನಲ್ಲಿ ಮಿತಿಮೀರಿ ವಾಹನಗಳು ಸಂಚರಿಸುತ್ತಿವೆ. ಕಳೆದ ಕೆಲ ತಿಂಗಳುಗಳಿಂದ ಶಿರಾಡಿ ಘಾಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣದಿಂದ ಚಾರ್ಮಾಡಿಯಲ್ಲಿ ವಾಹನ ಸಂಚಾರ ಹೆಚ್ಚಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು.
ಆದರೆ ಈಗ ಮತ್ತೆ ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆ ಮತ್ತಷ್ಟು ಹದಗೆಡುತ್ತಿದ್ದು. ರಸ್ತೆಯಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿದ್ದು ಕೆಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆನೀರು ರಸ್ತೆಯಲ್ಲಿಯೆ ಹರಿಯುತ್ತಿರುದರಿಂದ ಡಾಂಬಾರು ಕಿತ್ತು ಬಂದಿದ್ದು. ಕೆಲವೆಡೆ ರಸ್ತೆ ಬದಿಯ ತಡೆಗೋಡೆಗಳು ಶಿಥಿಲಗೊಂಡಿದ್ದು ವಾಹನಗಳು ಪ್ರಪಾತಕ್ಕೆ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಈ ಮಾರ್ಗವಾಗಿ ಲಘುವಾಹನಗಳು ಮಾತ್ರ ಸಂಚರಿಸಲು ಅವಕಾಶವಿದ್ದು 60 ಟನ್ ಗೂ ಹೆಚ್ಚು ಬಾರದ ಬಾರಿ ಘನವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ರಸ್ತೆ ಹದಗೆಡುತ್ತಿರುವುದರ ಜೊತೆಗೆ ಇತರ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ.

ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು , ಪೊಲೀಸ್ ಅಧಿಕಾರಿಗಳು,  ಈ ವಿಚಾರದಲ್ಲಿ ಜಾಣಕುರುಡು ಪ್ರದರ್ಶಿಸುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಜೊತೆಗೆ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕಿದೆ.

  • ಹಗಲು ರಾತ್ರಿ ಎನ್ನದೆ 60 ಟನ್ ಗೂ ಹೆಚ್ಚು ಬಾರದ ಬಾರಿ ಘನವಾಹನಗಳು ಈ ಮಾರ್ಗವಾಗಿಸಂಚರಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕದಿದ್ದರೆ ಚಾರ್ಮಾಡಿ ರಸ್ತೆ ಶಿಥಿಲಗೊಳ್ಳುವ ಸಾಧ್ಯತೆ ಇದೆ’                                                       

                              -ಸತೀಶ್ ದ್ಯಾವನಗೂಲ್, ಸ್ಥಳೀಯರು

 

  • ಬಾರಿ ವಾಹನಗಳ ಸಂಚಾರವನ್ನು ಚಾರ್ಮಾಡಿ ಮಾರ್ಗವಾಗಿ ನಿಷೇಧಿಸಲಾಗಿದೆ. ಲಘುವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದ್ದು ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.’
                                                 

                       –ಪ್ರಸನ್ನ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ