ನವದೆಹಲಿ- ಸಂಸತ್ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು ಮೋದಿ ಸರ್ಕಾರ 2014ರ ಚುನಾವಣೆ ವೇಳೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಆದರೆ ಎನ್ ಡಿ ಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ ಈ ವರೆಗೂ ಕೇಂದ್ರ ಸರ್ಕಾರ ಭರವಸೆಗಳನ್ನು ಈಡೇರಿಸಿಲ್ಲ, ಮೋದಿ ಸರ್ಕಾರ ಆಂದ್ರ ಪ್ರದೇಶದ 5 ಕೋಟಿ ಜನರಿಗೆ ಅನ್ಯಾಯ ಮಾಡಿದ್ದು ಇದು ಟಿಡಿಪಿ- ಬಿಜೆಪಿ ನಡುವಿನ ಯುದ್ದವಲ್ಲ ಆಂದ್ರ ಪ್ರದೇಶದ ಜನರ ಧರ್ಮ ಯುದ್ದವಾಗಿದೆ ಎಂದ ಅವರು ಹೇಳಿದ್ದು . ಆಂಧ್ರ ಪ್ರದೇಶ ವಿಭಜನೆಯಿಂದ ಸಾವಿರಾರು ಕೋಟಿ ರೂ ನಷ್ಟವನ್ನು ರಾಜ್ಯ ಅನುಭವಿಸಿದ್ದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಹಾಗೂ ಕರ್ನಾಟಕದಲ್ಲಿ ಹಲವು ದೂರುಗಳಿರುವ ಜನಾರ್ಧನ ರೆಡ್ಡಿ ಅವರನ್ನು ರಕ್ಷಿಸುತ್ತಿದ್ದೀರಿ ಎಂದು ಗಲ್ಲಾ ಜಯದೇವ್ ಅವರು ಕೇಂದ್ರ ಸರ್ಕಾರ ಕೆಲವರ ಹಿತಕ್ಕಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ, ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.