ಮೂಡಿಗೆರೆ- ಹೊರಾನಾಡು ದೇವಾಲಯದಿಂದ ಕಳಸಕ್ಕೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಕಾರು ನುಗ್ಗಿದ ಘಟನೆ ಕಳಸ ಸಮೀಪದ ಹಳುವಳ್ಳಿ ದೇವಾಸ್ಥಾನ ಸಮೀಪ ನಡೆದಿದ್ದು ಕಾರು ನುಗ್ಗಿರುವ ರಭಸಕ್ಕೆ ಮನೆಯ ಹಿಂಬದಿ ಜಖಂ ಆಗಿದ್ದು ಕಾರಿನಲ್ಲಿದ್ದ ಗಾಯಾಳುಗಳನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.