ದೇವನಗಲ್ಲು ಗ್ರಾಮದಲ್ಲಿ ಒಂದೇ ಜಾಗದಲ್ಲಿ ನಾಲ್ಕು ದಿನದಿಂದ ಬಿದ್ದಿದ್ದ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ …

726

ಮೂಡಿಗೆರೆ : ಮೈಮೇಲೆ ಗಾಯವಾಗಿದ್ರಿಂದ ತೆವಳಲಾಗದೆ ನಾಲ್ಕು ದಿನದಿಂದ ಒಂದೇ ಜಾಗದಲ್ಲಿ ಬಿದ್ದಿದ್ದ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿರೋ ಘಟನೆ ದೇವನಗಲ್ಲು ಗ್ರಾಮದಲ್ಲಿ ನಡೆದಿದೆ. ರಿಚರ್ಡ್ ಲೋಬೋ ಎಂಬುವರ ತೋಟದಲ್ಲಿ ಈ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಸರ್ಪವನ್ನು ನೋಡಿದ ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಗಾಬರಿಯಾಗಿದ್ದು. ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಕಾಳಿಂಗನನ್ನ ಸೆರೆ ಹಿಡಿದು ಸ್ಥಳಿಯ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದು. ಬೃಹತ್ ಕಾಳಿಂಗನನ್ನು ಸೆರೆ ಹಿಡಿದ ಮೇಲೆ ತೋಟದ ಮಾಲೀಕ ಹಾಗೂ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.