ಬಸ್ತಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ ಶಾಸಕ ಟಿ.ಡಿ ರಾಜೇಗೌಡರಿಂದ 5 ಲಕ್ಷದ ಚೆಕ್ ವಿತರಣೆ.

752

ಚಿಕ್ಕಮಗಳೂರು – ಕೊಪ್ಪ ತಾಲೂಕಿನ ಬಸ್ತಿಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕ ಅಶೋಕ್ ಕುಟುಂಬಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಾಸಕರ ಪರಿಹಾರ ನಿಧಿಯಿಂದ ಐದು ಲಕ್ಷದ ಚೆಕ್ ವಿತರಿಸಿದ್ದಾರೆ. ಜುಲೈ 11 ನೇ ತಾರೀಖು ಬಸ್ತಿ ಹಳ್ಳದ ಮೇಲೆ ಕೊಗ್ರೆ ಗ್ರಾಮಕ್ಕೆ ಹೋಗ್ತಿದ್ದ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಎನ್.ಆಡಿ.ಆರ್.ಎಫ್ ತಂಡ ಮೂರು ದಿನಗಳ ಕಾಲ ಶವಕ್ಕಾಗಿ ಶೋಧ ನಡೆಸಿ, ನೀರಿನ ರಭಸ ಕಂಡು ವಾಪಸ್ಸಾಗಿದ್ದು. ಬಳಿಕ ಸ್ಥಳಿಯರೇ ಚಂದಾ ಎತ್ತಿ ಖಾಸಗಿ ಈಜು ಪಟುಗಳನ್ನು ಕರೆಸಿ ಮೃತ ದೇಹ ಹುಡುಕಿಸಿದ್ದು. 9 ದಿನಗಳ ಕಾಲ ನಿರಂತರವಾಗಿ ಶವ ಹುಡುಕಿದ್ದು ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಬಸ್ತಿ ಹಳ್ಳದಿಂದ ಹತ್ತು ಕಿ.ಮೀ. ದೂರದ ಭದ್ರಾ ಗೇಟ್ ಬಳಿ ಅಶೋಕ್ ಮೃತ ದೇಹ ಪತ್ತೆಯಾಗಿತ್ತು. ಇಂದು ಮೃತ ಅಶೋಕ್ ಮನೆಗೆ ಭೇಟಿ ನೀಡಿದ್ದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಅಶೋಕ್ ಕುಟುಂಬಕ್ಕೆ ಸಾಂತ್ವಾನ ಹೇಳಿ, ಹತ್ತು ಲಕ್ಷದ ಚೆಕ್ ನೀಡಿದ್ದಾರೆ.